ಸೋಮೆಯಂಡ ಕೌಸಲ್ಯ ಸತೀಶ್

ಪ್ರತಿನಿಮಿಷದ ಉಸಿರಿನ
ಏರಿಳಿತಕೂ
ಬಿರಿಯುವ ಘಳಿಗೆಯ
ನವಪುಷ್ಪಕೂ
ಕಾಲವೆಂಬುದು ನಿರ್ಣಯವೇ!
ಉರುಳುವ ದಿನಗಳ
ಕಳೆಯುತಲಿ
ಬದಲಾಗುವ ಋತುಗಳ
ಸ್ವಾಗತದಲಿ
ಕಾಲವೆಂಬುದು ನಿರ್ಣಯವೇ!
ಏನಾಗಬೇಕೆಂಬುದ ಭವಿಷ್ಯತ್ತಿನ
ಹೊತ್ತಿಗಾಗಿ
ಕಳೆದುಹೋದ ನಿನ್ನೆಗಳ
ಕನವರಿಕೆಗಾಗಿ
ಕಾಲವೆಂಬುದು ನಿರ್ಣಯವೇ!
ಭೂಪರಿಭ್ರಮಣದ ತಿರುಗುವಿಕೆ
ಸ್ಕಾಂತೀಯ ಚಲನೆ
ನವಗ್ರಹಗಳ ಲೆಕ್ಕಾಚಾರದ
ಕಕ್ಷೆಯ ಚಲನೆ
ಕಾಲವೆಂಬುದು ನಿರ್ಣಯವೇ!
ಸೂರ್ಯ ಹೊತ್ತಿ ಅನಿಲ
ಉರಿದಾಗಲೂ
ಭೂಸಲೆತದ ಖಂಡವಿಭಜನೆ
ಆದಾಗಲೂ
ಕಾಲವೆಂಬುದು ನಿರ್ಣಯವೇ!
ಇಲ್ಲಿರುವೆನೆಂಬ ಈ ದಿನದ
ಅಸ್ಥಿತ್ವ
ನಾಳೆ ಇರುವೆನೆಂಬ ದಿನದ
ಸ್ವಾಧೀನತ್ವ
ಕಾಲವೆಂಬುದು ನಿರ್ಣಯವೇ!
ಸೋಮೆಯಂಡ ಕೌಸಲ್ಯ ಸತೀಶ್
