
ಮಡಿಕೇರಿ: ಇತ್ತೀಚೆಗೆ ನಡೆದ ಮಡಿಕೇರಿ ವಲಯ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಹಾಕತ್ತೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಒಟ್ಟು ಹತ್ತು ಪದಕಗಳನ್ನು ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.
ಕಾವ್ಯ ಆರ್. ಅವರು 200 ಮೀಟರ್ ಓಟದಲ್ಲಿ ಪ್ರಥಮ ಮತ್ತು 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಹರ್ಷಿತ್ ವೈ.ಎ. ಅವರು ಡಿಸ್ಕಸ್ ಥ್ರೋನಲ್ಲಿ ಪ್ರಥಮ ಹಾಗೂ ಜಾವೆಲಿನ್ ಥ್ರೋನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಸಹನಾ ಹೆಚ್.ಎಸ್. ಡಿಸ್ಕಸ್ ಥ್ರೋನಲ್ಲಿ ದ್ವಿತೀಯ ಮತ್ತು ಶಾಟ್ ಪುಟ್‌ನಲ್ಲಿ ತೃತೀಯ, ರೋಶನ್ ಎಂ.ಎಸ್. ಡಿಸ್ಕಸ್ ಥ್ರೋನಲ್ಲಿ ದ್ವಿತೀಯ ಹಾಗೂ ಜಾವೆಲಿನ್ ಥ್ರೋನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಜೀವನ್ ವಿ.ಆರ್. ಶಾಟ್ ಪುಟ್‌ನಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಶಾಲೆಯ ಬಾಲಕಿಯರ ತಂಡ 4×100 ಮೀಟರ್ ರಿಲೇ ಓಟದಲ್ಲಿ ತೃತೀಯ ಸ್ಥಾನ ಪಡೆದಿದೆ.
ಈ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
