ಹೊನ್ನಕಿರಣ

ಸೋಮೆಯಂಡ ಕೌಸಲ್ಯ ಸತೀಶ್

ಹೊನ್ನಕಿರಣದ ಸಂಚಲನ
ಮೂಡಣದ ಹೂರಣ
ಕಲೆತುಬೆರೆತ ರಸವಿಜ್ಞಾನ

ಜೀವಸಂಕುಲಕೆ ನವೋತ್ಸಾಹ
ಸಂಭ್ರಮದ ಮೇಘೋತ್ಸವ
ಸಾಗಿಹುದು‌ ನಿತ್ಯೋತ್ಸವ

ಮಣ್ಣಕಣಕಣ ಸ್ಪರ್ಷಿಸುತಲಿ
ಜೀವಸತ್ವವ ಪೋಷಿಸುತಲಿ
ಭಾಷ್ಪಪೂರಣದ ವಿಸರ್ಗದಲಿ

ಅಣುಅಣುವಿನ ಸಮ್ಮಿಲನಕೆ
ಸಾಕ್ಷಿಯಾಗಿಹ ಪ್ರಕೃತಿ ಮಾತೃಕೆ
ಲಘುಗುರು ಛಂದೋವ್ಯಾಕರಣಕೆ

ಧರಣಿಗರ್ಭದ ಚೇತೋಹಾರಿ
ವನಕುಸುಮಗಳ ಚಂದೋಹಾರಿ
ಮೊಗ್ಗುಚಿಗುರಿನ ಮನೋಹಾರಿ

ಪಚ್ಚೆಪಚ್ಚೆಯ ಮೈಮಾಟ
ಕಾಲಸರಿಯುತ್ತ ನಾಗಾಲೋಟ
ಸರಿಸಮಯ ಕಲಿಸುವ ಪಾಠ

ಹೊತ್ತು ಮುಳುಗುವ ಸದ್ದು
ಕತ್ತಲಾವರಿಸೆ ಅಂದಕಾರದ ಗುದ್ದು
ಅನುಭಾವಿ ಹೊರಟ ತಿಳಿದೆದ್ದು!

Leave a Comment

Your email address will not be published. Required fields are marked *

Scroll to Top